Sri Venkateswara Swamy · Traditional devotional text · Source: vignanam.org (Traditional devotional text (public-domain shlokas))
ರಾಮ ದಶರಥರಾಮ ನಿಜ ಸತ್ಯ- ಕಾಮ ನಮೋ ನಮೋ ಕಾಕುತ್ಥ್ಸರಾಮ ॥ ಕರುಣಾನಿಧಿ ರಾಮ ಕೌಸಲ್ಯಾನಂದನ ರಾಮ ಪರಮ ಪುರುಷ ಸೀತಾಪತಿರಾಮ । ಶರಧಿ ಬಂಧನ ರಾಮ ಸವನ ರಕ್ಷಕ ರಾಮ ಗುರುತರ ರವಿವಂಶ ಕೋದಂಡ ರಾಮ ॥ ದನುಜಹರಣ ರಾಮ ದಶರಥಸುತ ರಾಮ ವಿನುತಾಮರ ಸ್ತೋತ್ರ ವಿಜಯರಾಮ । ಮನುಜಾವತಾರಾ ರಾಮ ಮಹನೀಯ ಗುಣರಾಮ ಅನಿಲಜಪ್ರಿಯ ರಾಮ ಅಯೋಧ್ಯರಾಮ ॥ ಸುಲಲಿತಯಶ ರಾಮ ಸುಗ್ರೀವ ವರದ ರಾಮ ಕಲುಷ ರಾವಣ ಭಯಂಕರ ರಾಮ । ವಿಲಸಿತ ರಘುರಾಮ ವೇದಗೋಚರ ರಾಮ ಕಲಿತ ಪ್ರತಾಪ ಶ್ರೀವೇಂಕಟಗಿರಿ ರಾಮ ॥
Offered for worship and study, not as prediction. Non-commercial.
More devotional texts
Browse Related Categories: