Bhartruhari Shataka Trishati · Traditional devotional text · Source: vignanam.org (Traditional devotional text (public-domain shlokas))
ದಿಕ್ಕಾಲಾದ್ಯನವಚ್ಛಿನ್ನಾನಂತಚಿನ್ಮಾತ್ರಮೂರ್ತಯೇ । ಸ್ವಾನುಭೂತ್ಯೇಕಮಾನಾಯ ನಮಃ ಶಾಂತಾಯ ತೇಜಸೇ ॥ 1.1 ॥
ಬೋದ್ಧಾರೋ ಮತ್ಸರಗ್ರಸ್ತಾಃ ಪ್ರಭವಃ ಸ್ಮಯದೂಷಿತಾಃ । ಅಬೋಧೋಪಹತಾಃ ಚಾನ್ಯೇ ಜೀರ್ಣಮಂಗೇ ಸುಭಾಷಿತಮ್ ॥ 1.2 ॥
Offered for worship and study, not as prediction. Non-commercial.
ಅಜ್ಞಃ ಸುಖಂ ಆರಾಧ್ಯಃ ಸುಖತರಂ ಆರಾಧ್ಯತೇ ವಿಶೇಷಜ್ಞಃ । ಜ್ಞಾನಲವದುರ್ವಿದಗ್ಧಂ ಬ್ರಹ್ಮಾಪಿ ತಂ ನರಂ ನ ರಂಜಯತಿ ॥ 1.3 ॥
ಪ್ರಸಹ್ಯ ಮಣಿಂ ಉದ್ಧರೇನ್ಮಕರವಕ್ತ್ರದಂಷ್ಟ್ರಾಂತರಾತ್ ಸಮುದ್ರಂ ಅಪಿ ಸಂತರೇತ್ಪ್ರಚಲದೂರ್ಮಿಮಾಲಾಕುಲಮ್ । ಭುಜಂಗಂ ಅಪಿ ಕೋಪಿತಂ ಶಿರಸಿ ಪುಷ್ಪವದ್ಧಾರಯೇತ್ ನ ತು ಪ್ರತಿನಿವಿಷ್ಟಮೂರ್ಖಜನಚಿತ್ತಂ ಆರಾಧಯೇತ್ ॥ 1.4 ॥
ಲಭೇತ ಸಿಕತಾಸು ತೈಲಂ ಅಪಿ ಯತ್ನತಃ ಪೀಡಯನ್ ಪಿಬೇಚ್ಚ ಮೃಗತೃಷ್ಣಿಕಾಸು ಸಲಿಲಂ ಪಿಪಾಸಾರ್ದಿತಃ । ಕ್ವಚಿದಪಿ ಪರ್ಯಟನ್ಶಶವಿಷಾಣಂ ಆಸಾದಯೇತ್ ನ ತು ಪ್ರತಿನಿವಿಷ್ಟಮೂರ್ಖಚಿತ್ತಂ ಆರಾಧಯೇತ್ ॥ 1.5 ॥
ವ್ಯಾಲಂ ಬಾಲಮೃಣಾಲತಂತುಭಿರಸೌ ರೋದ್ಧುಂ ಸಮುಜ್ಜೃಂಭತೇ ಛೇತ್ತುಂ ವಜ್ರಮಣಿಂ ಶಿರೀಷಕುಸುಮಪ್ರಾಂತೇನ ಸನ್ನಹ್ಯತಿ । ಮಾಧುರ್ಯಂ ಮಧುಬಿಂದುನಾ ರಚಯಿತುಂ ಕ್ಷಾರಾಮುಧೇರೀಹತೇ ನೇತುಂ ವಾಂಛಂತಿ ಯಃ ಖಲಾನ್ಪಥಿ ಸತಾಂ ಸೂಕ್ತೈಃ ಸುಧಾಸ್ಯಂದಿಭಿಃ ॥ 1.6 ॥
ಸ್ವಾಯತ್ತಂ ಏಕಾಂತಗುಣಂ ವಿಧಾತ್ರಾ ವಿನಿರ್ಮಿತಂ ಛಾದನಂ ಅಜ್ಞತಾಯಾಃ । ವಿಶೇಷತಃ ಸರ್ವವಿದಾಂ ಸಮಾಜೇ ವಿಭೂಷಣಂ ಮೌನಂ ಅಪಂಡಿತಾನಾಮ್ ॥ 1.7 ॥
ಯದಾ ಕಿಂಚಿಜ್ಜ್ಞೋಽಹಂ ದ್ವಿಪ ಇವ ಮದಾಂಧಃ ಸಮಭವಂ ತದಾ ಸರ್ವಜ್ಞೋಽಸ್ಮೀತ್ಯಭವದವಲಿಪ್ತಂ ಮಮ ಮನಃ ಯದಾ ಕಿಂಚಿತ್ಕಿಂಚಿದ್ಬುಧಜನಸಕಾಶಾದವಗತಂ ತದಾ ಮೂರ್ಖೋಽಸ್ಮೀತಿ ಜ್ವರ ಇವ ಮದೋ ಮೇ ವ್ಯಪಗತಃ ॥ 1.8 ॥
ಕೃಮಿಕುಲಚಿತ್ತಂ ಲಾಲಾಕ್ಲಿನ್ನಂ ವಿಗಂಧಿಜುಗುಪ್ಸಿತಂ ನಿರುಪಮರಸಂ ಪ್ರೀತ್ಯಾ ಖಾದನ್ನರಾಸ್ಥಿ ನಿರಾಮಿಷಮ್ । ಸುರಪತಿಂ ಅಪಿ ಶ್ವಾ ಪಾರ್ಶ್ವಸ್ಥಂ ವಿಲೋಕ್ಯ ನ ಶಂಕತೇ ನ ಹಿ ಗಣಯತಿ ಕ್ಷುದ್ರೋ ಜಂತುಃ ಪರಿಗ್ರಹಫಲ್ಗುತಾಮ್ ॥ 1.9 ॥
ಶಿರಃ ಶಾರ್ವಂ ಸ್ವರ್ಗಾತ್ಪಶುಪತಿಶಿರಸ್ತಃ ಕ್ಷಿತಿಧರಂ ಮಹೀಧ್ರಾದುತ್ತುಂಗಾದವನಿಂ ಅವನೇಶ್ಚಾಪಿ ಜಲಧಿಮ್ । ಅಧೋಽಧೋ ಗಂಗೇಯಂ ಪದಂ ಉಪಗತಾ ಸ್ತೋಕಂ ಅಥವಾವಿವೇಕಭ್ರಷ್ಟಾನಾಂ ಭವತಿ ವಿನಿಪಾತಃ ಶತಮುಖಃ ॥ 1.10 ॥
ಶಕ್ಯೋ ವಾರಯಿತುಂ ಜಲೇನ ಹುತಭುಕ್ಚ್ಛತ್ರೇಣ ಸೂರ್ಯಾತಪೋ ನಾಗೇಂದ್ರೋ ನಿಶಿತಾಂಕುಶೇನ ಸಮದೋ ದಂಡೇನ ಗೋಗರ್ದಭೌ । ವ್ಯಾಧಿರ್ಭೇಷಜಸಂಗ್ರಹೈಶ್ಚ ವಿವಿಧೈರ್ಮಂತ್ರಪ್ರಯೋಗೈರ್ವಿಷಂ ಸರ್ವಸ್ಯೌಷಧಂ ಅಸ್ತಿ ಶಾಸ್ತ್ರವಿಹಿತಂ ಮೂರ್ಖಸ್ಯ ನಾಸ್ತ್ಯೌಷಧಿಮ್ ॥ 1.11 ॥
ಸಾಹಿತ್ಯಸಂಗೀತಕಲಾವಿಹೀನಃ ಸಾಕ್ಷಾತ್ಪಶುಃ ಪುಚ್ಛವಿಷಾಣಹೀನಃ । ತೃಣಂ ನ ಖಾದನ್ನಪಿ ಜೀವಮಾನಸ್ ತದ್ಭಾಗಧೇಯಂ ಪರಮಂ ಪಶೂನಾಮ್ ॥ 1.12 ॥
ಯೇಷಾಂ ನ ವಿದ್ಯಾ ನ ತಪೋ ನ ದಾನಂ ಜ್ಞಾನಂ ನ ಶೀಲಂ ನ ಗುಣೋ ನ ಧರ್ಮಃ । ತೇ ಮರ್ತ್ಯಲೋಕೇ ಭುವಿ ಭಾರಭೂತಾ ಮನುಷ್ಯರೂಪೇಣ ಮೃಗಾಶ್ಚರಂತಿ ॥ 1.13 ॥
ವರಂ ಪರ್ವತದುರ್ಗೇಷು ಭ್ರಾಂತಂ ವನಚರೈಃ ಸಹ ನ ಮೂರ್ಖಜನಸಂಪರ್ಕಃ ಸುರೇಂದ್ರಭವನೇಷ್ವಪಿ ॥ 1.14 ॥
ಶಾಸ್ತ್ರೋಪಸ್ಕೃತಶಬ್ದಸುಂದರಗಿರಃ ಶಿಷ್ಯಪ್ರದೇಯಾಗಮಾ ವಿಖ್ಯಾತಾಃ ಕವಯೋ ವಸಂತಿ ವಿಷಯೇ ಯಸ್ಯ ಪ್ರಭೋರ್ನಿರ್ಧನಾಃ । ತಜ್ಜಾಡ್ಯಂ ವಸುಧಾದಿಪಸ್ಯ ಕವಯಸ್ತ್ವರ್ಥಂ ವಿನಾಪೀಶ್ವರಾಃ ಕುತ್ಸ್ಯಾಃ ಸ್ಯುಃ ಕುಪರೀಕ್ಷಕಾ ಹಿ ಮಣಯೋ ಯೈರರ್ಘತಃ ಪಾತಿತಾಃ ॥ 1.15 ॥
ಹರ್ತುರ್ಯಾತಿ ನ ಗೋಚರಂ ಕಿಂ ಅಪಿ ಶಂ ಪುಷ್ಣಾತಿ ಯತ್ಸರ್ವದಾಽಪ್ಯ್ ಅರ್ಥಿಭ್ಯಃ ಪ್ರತಿಪಾದ್ಯಮಾನಂ ಅನಿಶಂ ಪ್ರಾಪ್ನೋತಿ ವೃದ್ಧಿಂ ಪರಾಮ್ । ಕಲ್ಪಾಂತೇಷ್ವಪಿ ನ ಪ್ರಯಾತಿ ನಿಧನಂ ವಿದ್ಯಾಖ್ಯಂ ಅಂತರ್ಧನಂ ಯೇಷಾಂ ತಾನ್ಪ್ರತಿ ಮಾನಂ ಉಜ್ಝತ ನೃಪಾಃ ಕಸ್ತೈಃ ಸಹ ಸ್ಪರ್ಧತೇ ॥ 1.16 ॥
ಅಧಿಗತಪರಮಾರ್ಥಾನ್ಪಂಡಿತಾನ್ಮಾವಮಂಸ್ಥಾಸ್ ತೃಣಂ ಇವ ಲಘು ಲಕ್ಷ್ಮೀರ್ನೈವ ತಾನ್ಸಂರುಣದ್ಧಿ । ಅಭಿನವಮದಲೇಖಾಶ್ಯಾಮಗಂಡಸ್ಥಲಾನಾಂ ನ ಭವತಿ ಬಿಸತಂತುರ್ವಾರಣಂ ವಾರಣಾನಾಮ್ ॥ 1.17 ॥
ಅಂಭೋಜಿನೀವನವಿಹಾರವಿಲಾಸಂ ಏವ ಹಂಸಸ್ಯ ಹಂತಿ ನಿತರಾಂ ಕುಪಿತೋ ವಿಧಾತಾ । ನ ತ್ವಸ್ಯ ದುಗ್ಧಜಲಭೇದವಿಧೌ ಪ್ರಸಿದ್ಧಾಂ ವೈದಗ್ಧೀಕೀರ್ತಿಂ ಅಪಹರ್ತುಂ ಅಸೌ ಸಮರ್ಥಃ ॥ 1.18 ॥
ಕೇಯೂರಾಣಿ ನ ಭೂಷಯಂತಿ ಪುರುಷಂ ಹಾರಾ ನ ಚಂದ್ರೋಜ್ಜ್ವಲಾ ನ ಸ್ನಾನಂ ನ ವಿಲೇಪನಂ ನ ಕುಸುಮಂ ನಾಲಂಕೃತಾ ಮೂರ್ಧಜಾಃ । ವಾಣ್ಯೇಕಾ ಸಮಲಂಕರೋತಿ ಪುರುಷಂ ಯಾ ಸಂಸ್ಕೃತಾ ಧಾರ್ಯತೇ ಕ್ಷೀಯಂತೇ ಖಲು ಭೂಷಣಾನಿ ಸತತಂ ವಾಗ್ಭೂಷಣಂ ಭೂಷಣಮ್ ॥ 1.19 ॥
ವಿದ್ಯಾ ನಾಮ ನರಸ್ಯ ರೂಪಂ ಅಧಿಕಂ ಪ್ರಚ್ಛನ್ನಗುಪ್ತಂ ಧನಂ ವಿದ್ಯಾ ಭೋಗಕರೀ ಯಶಃಸುಖಕರೀ ವಿದ್ಯಾ ಗುರೂಣಾಂ ಗುರುಃ । ವಿದ್ಯಾ ಬಂಧುಜನೋ ವಿದೇಶಗಮನೇ ವಿದ್ಯಾ ಪರಾ ದೇವತಾ ವಿದ್ಯಾ ರಾಜಸು ಪೂಜ್ಯತೇ ನ ತು ಧನಂ ವಿದ್ಯಾವಿಹೀನಃ ಪಶುಃ ॥ 1.20 ॥
ಕ್ಷಾಂತಿಶ್ಚೇತ್ಕವಚೇನ ಕಿಂ ಕಿಂ ಅರಿಭಿಃ ಕ್ರೋಧೋಽಸ್ತಿ ಚೇದ್ದೇಹಿನಾಂ ಜ್ಞಾತಿಶ್ಚೇದನಲೇನ ಕಿಂ ಯದಿ ಸುಹೃದ್ದಿವ್ಯೌಷಧಂ ಕಿಂ ಫಲಮ್ । ಕಿಂ ಸರ್ಪೈರ್ಯದಿ ದುರ್ಜನಾಃ ಕಿಂ ಉ ಧನೈರ್ವಿದ್ಯಾಽನವದ್ಯಾ ಯದಿ ವ್ರೀಡಾ ಚೇತ್ಕಿಂ ಉ ಭೂಷಣೈಃ ಸುಕವಿತಾ ಯದ್ಯಸ್ತಿ ರಾಜ್ಯೇನ ಕಿಮ್ ॥ 1.21 ॥
ದಾಕ್ಷಿಣ್ಯಂ ಸ್ವಜನೇ ದಯಾ ಪರಿಜನೇ ಶಾಠ್ಯಂ ಸದಾ ದುರ್ಜನೇ ಪ್ರೀತಿಃ ಸಾಧುಜನೇ ನಯೋ ನೃಪಜನೇ ವಿದ್ವಜ್ಜನೇ ಚಾರ್ಜವಮ್ । ಶೌರ್ಯಂ ಶತ್ರುಜನೇ ಕ್ಷಮಾ ಗುರುಜನೇ ಕಾಂತಾಜನೇ ಧೃಷ್ಟತಾ ಯೇ ಚೈವಂ ಪುರುಷಾಃ ಕಲಾಸು ಕುಶಲಾಸ್ತೇಷ್ವೇವ ಲೋಕಸ್ಥಿತಿಃ ॥ 1.22 ॥
ಜಾಡ್ಯಂ ಧಿಯೋ ಹರತಿ ಸಿಂಚತಿ ವಾಚಿ ಸತ್ಯಂ ಮಾನೋನ್ನತಿಂ ದಿಶತಿ ಪಾಪಂ ಅಪಾಕರೋತಿ । ಚೇತಃ ಪ್ರಸಾದಯತಿ ದಿಕ್ಷು ತನೋತಿ ಕೀರ್ತಿಂ ಸತ್ಸಂಗತಿಃ ಕಥಯ ಕಿಂ ನ ಕರೋತಿ ಪುಂಸಾಮ್ ॥ 1.23 ॥
ಜಯಂತಿ ತೇ ಸುಕೃತಿನೋ ರಸಸಿದ್ಧಾಃ ಕವೀಶ್ವರಾಃ । ನಾಸ್ತಿ ಯೇಷಾಂ ಯಶಃಕಾಯೇ ಜರಾಮರಣಜಂ ಭಯಮ್ ॥ 1.24 ॥
ಸೂನುಃ ಸಚ್ಚರಿತಃ ಸತೀ ಪ್ರಿಯತಮಾ ಸ್ವಾಮೀ ಪ್ರಸಾದೋನ್ಮುಖಃ ಸ್ನಿಗ್ಧಂ ಮಿತ್ರಂ ಅವಂಚಕಃ ಪರಿಜನೋ ನಿಃಕ್ಲೇಶಲೇಶಂ ಮನಃ । ಆಕಾರೋ ರುಚಿರಃ ಸ್ಥಿರಶ್ಚ ವಿಭವೋ ವಿದ್ಯಾವದಾತಂ ಮುಖಂ ತುಷ್ಟೇ ವಿಷ್ಟಪಕಷ್ಟಹಾರಿಣಿ ಹರೌ ಸಂಪ್ರಾಪ್ಯತೇ ದೇಹಿನಾ ॥ 1.25 ॥
ಪ್ರಾಣಾಘಾತಾನ್ನಿವೃತ್ತಿಃ ಪರಧನಹರಣೇ ಸಂಯಮಃ ಸತ್ಯವಾಕ್ಯಂ ಕಾಲೇ ಶಕ್ತ್ಯಾ ಪ್ರದಾನಂ ಯುವತಿಜನಕಥಾಮೂಕಭಾವಃ ಪರೇಷಾಮ್ । ತೃಷ್ಣಾಸ್ರೋತೋ ವಿಭಂಗೋ ಗುರುಷು ಚ ವಿನಯಃ ಸರ್ವಭೂತಾನುಕಂಪಾ ಸಾಮಾನ್ಯಃ ಸರ್ವಶಾಸ್ತ್ರೇಷ್ವನುಪಹತವಿಧಿಃ ಶ್ರೇಯಸಾಂ ಏಷ ಪಂಥಾಃ ॥ 1.26 ॥
ಪ್ರಾರಭ್ಯತೇ ನ ಖಲು ವಿಘ್ನಭಯೇನ ನೀಚೈಃ ಪ್ರಾರಭ್ಯ ವಿಘ್ನವಿಹತಾ ವಿರಮಂತಿ ಮಧ್ಯಾಃ । ವಿಘ್ನೈಃ ಪುನಃ ಪುನರಪಿ ಪ್ರತಿಹನ್ಯಮಾನಾಃ ಪ್ರಾರಬ್ಧಂ ಉತ್ತಮಜನಾ ನ ಪರಿತ್ಯಜಂತಿ ॥ 1.27 ॥
ಅಸಂತೋ ನಾಭ್ಯರ್ಥ್ಯಾಃ ಸುಹೃದಪಿ ನ ಯಾಚ್ಯಃ ಕೃಶಧನಃ ಪ್ರಿಯಾ ನ್ಯಾಯ್ಯಾ ವೃತ್ತಿರ್ಮಲಿನಂ ಅಸುಭಂಗೇಽಪ್ಯಸುಕರಮ್ । ವಿಪದ್ಯುಚ್ಚೈಃ ಸ್ಥೇಯಂ ಪದಂ ಅನುವಿಧೇಯಂ ಚ ಮಹತಾಂ ಸತಾಂ ಕೇನೋದ್ದಿಷ್ಟಂ ವಿಷಮಂ ಅಸಿಧಾರಾವ್ರತಂ ಇದಮ್ ॥ 1.28 ॥
ಕ್ಷುತ್ಕ್ಷಾಮೋಽಪಿ ಜರಾಕೃಶೋಽಪಿ ಶಿಥಿಲಪ್ರಾಣೋಽಪಿ ಕಷ್ಟಾಂ ದಶಾಂ ಆಪನ್ನೋಽಪಿ ವಿಪನ್ನದೀಧಿತಿರಿತಿ ಪ್ರಾಣೇಷು ನಶ್ಯತ್ಸ್ವಪಿ । ಮತ್ತೇಭೇಂದ್ರವಿಭಿನ್ನಕುಂಭಪಿಶಿತಗ್ರಾಸೈಕಬದ್ಧಸ್ಪೃಹಃ ಕಿಂ ಜೀರ್ಣಂ ತೃಣಂ ಅತ್ತಿ ಮಾನಮಹತಾಂ ಅಗ್ರೇಸರಃ ಕೇಸರೀ ॥ 1.29 ॥
ಸ್ವಲ್ಪಸ್ನಾಯುವಸಾವಶೇಷಮಲಿನಂ ನಿರ್ಮಾಂಸಂ ಅಪ್ಯಸ್ಥಿ ಗೋಃ ಶ್ವಾ ಲಬ್ಧ್ವಾ ಪರಿತೋಷಂ ಏತಿ ನ ತು ತತ್ತಸ್ಯ ಕ್ಷುಧಾಶಾಂತಯೇ । ಸಿಂಹೋ ಜಂಬುಕಂ ಅಂಕಂ ಆಗತಂ ಅಪಿ ತ್ಯಕ್ತ್ವಾ ನಿಹಂತಿ ದ್ವಿಪಂ ಸರ್ವಃ ಕೃಚ್ಛ್ರಗತೋಽಪಿ ವಾಂಛಂತಿ ಜನಃ ಸತ್ತ್ವಾನುರೂಪಂ ಫಲಮ್ ॥ 1.30 ॥
ಲಾಂಗೂಲಚಾಲನಂ ಅಧಶ್ಚರಣಾವಪಾತಂ ಭೂಮೌ ನಿಪತ್ಯ ವದನೋದರದರ್ಶನಂ ಚ । ಶ್ವಾ ಪಿಂಡದಸ್ಯ ಕುರುತೇ ಗಜಪುಂಗವಸ್ತು ಧೀರಂ ವಿಲೋಕಯತಿ ಚಾಟುಶತೈಶ್ಚ ಭುಂಕ್ತೇ ॥ 1.31 ॥
ಪರಿವರ್ತಿನಿ ಸಂಸಾರೇ ಮೃತಃ ಕೋ ವಾ ನ ಜಾಯತೇ । ಸ ಜಾತೋ ಯೇನ ಜಾತೇನ ಯಾತಿ ವಂಶಃ ಸಮುನ್ನತಿಮ್ ॥ 1.32 ॥
ಕುಸುಮಸ್ತವಕಸ್ಯೇವ ದ್ವಯೀ ವೃತ್ತಿರ್ಮನಸ್ವಿನಃ । ಮೂರ್ಧ್ನಿ ವಾ ಸರ್ವಲೋಕಸ್ಯ ಶೀರ್ಯತೇ ವನ ಏವ ವಾ ॥ 1.33 ॥
ಸಂತ್ಯನ್ಯೇಽಪಿ ಬೃಹಸ್ಪತಿಪ್ರಭೃತಯಃ ಸಂಭಾವಿತಾಃ ಪಂಚಷಾಸ್ ತಾನ್ಪ್ರತ್ಯೇಷ ವಿಶೇಷವಿಕ್ರಮರುಚೀ ರಾಹುರ್ನ ವೈರಾಯತೇ । ದ್ವಾವೇವ ಗ್ರಸತೇ ದಿವಾಕರನಿಶಾಪ್ರಾಣೇಶ್ವರೌ ಭಾಸ್ಕರೌ ಭ್ರಾತಃ ಪರ್ವಣಿ ಪಶ್ಯ ದಾನವಪತಿಃ ಶೀರ್ಷಾವಶೇಷಾಕೃತಿಃ ॥ 1.34 ॥
ವಹತಿ ಭುವನಶ್ರೇಣಿಂ ಶೇಷಃ ಫಣಾಫಲಕಸ್ಥಿತಾಂ ಕಮಠಪತಿನಾ ಮಧ್ಯೇಪೃಷ್ಠಂ ಸದಾ ಸ ಚ ಧಾರ್ಯತೇ । ತಂ ಅಪಿ ಕುರುತೇ ಕ್ರೋಡಾಧೀನಂ ಪಯೋಧಿರನಾದರಾದ್ ಅಹಹ ಮಹತಾಂ ನಿಃಸೀಮಾನಶ್ಚರಿತ್ರವಿಭೂತಯಃ ॥ 1.35 ॥
ವರಂ ಪಕ್ಷಚ್ಛೇದಃ ಸಮದಮಘವನ್ಮುಕ್ತಕುಲಿಶಪ್ರಹಾರೈರ್ ಉದ್ಗಚ್ಛದ್ಬಹುಲದಹನೋದ್ಗಾರಗುರುಭಿಃ । ತುಷಾರಾದ್ರೇಃ ಸೂನೋರಹಹ ಪಿತರಿ ಕ್ಲೇಶವಿವಶೇ ನ ಚಾಸೌ ಸಂಪಾತಃ ಪಯಸಿ ಪಯಸಾಂ ಪತ್ಯುರುಚಿತಃ ॥ 1.36 ॥
ಸಿಂಹಃ ಶಿಶುರಪಿ ನಿಪತತಿ ಮದಮಲಿನಕಪೋಲಭಿತ್ತಿಷು ಗಜೇಷು । ಪ್ರಕೃತಿರಿಯಂ ಸತ್ತ್ವವತಾಂ ನ ಖಲು ವಯಸ್ತೇಜಸೋ ಹೇತುಃ ॥ 1.37 ॥
ಜಾತಿರ್ಯಾತು ರಸಾತಲಂ ಗುಣಗಣೈಸ್ತತ್ರಾಪ್ಯಧೋ ಗಮ್ಯತಾಂ ಶೀಲಂ ಶೈಲತಟಾತ್ಪತತ್ವಭಿಜನಃ ಸಂದಹ್ಯತಾಂ ವಹ್ನಿನಾ । ಶೌರ್ಯೇ ವೈರಿಣಿ ವಜ್ರಂ ಆಶು ನಿಪತತ್ವರ್ಥೋಽಸ್ತು ನಃ ಕೇವಲಂ ಯೇನೈಕೇನ ವಿನಾ ಗುಣಸ್ತೃಣಲವಪ್ರಾಯಾಃ ಸಮಸ್ತಾ ಇಮೇ ॥ 1.38 ॥
ಧನಂ ಅರ್ಜಯ ಕಾಕುತ್ಸ್ಥ ಧನಮೂಲಂ ಇದಂ ಜಗತ್ । ಅಂತರಂ ನಾಭಿಜಾನಾಮಿ ನಿರ್ಧನಸ್ಯ ಮೃತಸ್ಯ ಚ ॥ 1.39 ॥
ತಾನೀಂದ್ರಿಯಾಣ್ಯವಿಕಲಾನಿ ತದೇವ ನಾಮ ಸಾ ಬುದ್ಧಿರಪ್ರತಿಹತಾ ವಚನಂ ತದೇವ । ಅರ್ಥೋಷ್ಮಣಾ ವಿರಹಿತಃ ಪುರುಷಃ ಕ್ಷಣೇನ ಸೋಽಪ್ಯನ್ಯ ಏವ ಭವತೀತಿ ವಿಚಿತ್ರಂ ಏತತ್ ॥ 1.40 ॥
ಯಸ್ಯಾಸ್ತಿ ವಿತ್ತಂ ಸ ನರಃ ಕುಲೀನಃ ಸ ಪಂಡಿತಃ ಸ ಶ್ರುತವಾನ್ಗುಣಜ್ಞಃ । ಸ ಏವ ವಕ್ತಾ ಸ ಚ ದರ್ಶನೀಯಃ ಸರ್ವೇ ಗುಣಾಃ ಕಾಂಚನಂ ಆಶ್ರಯಂತಿ ॥ 1.41 ॥
ದೌರ್ಮಂತ್ರ್ಯಾನ್ನೃಪತಿರ್ವಿನಶ್ಯತಿ ಯತಿಃ ಸಂಗಾತ್ಸುತೋ ಲಾಲನಾತ್ ವಿಪ್ರೋಽನಧ್ಯಯನಾತ್ಕುಲಂ ಕುತನಯಾಚ್ಛೀಲಂ ಖಲೋಪಾಸನಾತ್ । ಹ್ರೀರ್ಮದ್ಯಾದನವೇಕ್ಷಣಾದಪಿ ಕೃಷಿಃ ಸ್ನೇಹಃ ಪ್ರವಾಸಾಶ್ರಯಾನ್ ಮೈತ್ರೀ ಚಾಪ್ರಣಯಾತ್ಸಮೃದ್ಧಿರನಯಾತ್ತ್ಯಾಗಪ್ರಮಾದಾದ್ಧನಮ್ ॥ 1.42 ॥
ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ । ಯೋ ನ ದದಾತಿ ನ ಭುಂಕ್ತೇ ತಸ್ಯ ತೃತೀಯಾ ಗತಿರ್ಭವತಿ ॥ 1.43 ॥
ಮಣಿಃ ಶಾಣೋಲ್ಲೀಢಃ ಸಮರವಿಜಯೀ ಹೇತಿದಲಿತೋ ಮದಕ್ಷೀಣೋ ನಾಗಃ ಶರದಿ ಸರಿತಃ ಶ್ಯಾನಪುಲಿನಾಃ । ಕಲಾಶೇಷಶ್ಚಂದ್ರಃ ಸುರತಮೃದಿತಾ ಬಾಲವನಿತಾ ತನ್ನಿಮ್ನಾ ಶೋಭಂತೇ ಗಲಿತವಿಭವಾಶ್ಚಾರ್ಥಿಷು ನರಾಃ ॥ 1.44 ॥
ಪರಿಕ್ಷೀಣಃ ಕಶ್ಚಿತ್ಸ್ಪೃಹಯತಿ ಯವಾನಾಂ ಪ್ರಸೃತಯೇ ಸ ಪಶ್ಚಾತ್ಸಂಪೂರ್ಣಃ ಕಲಯತಿ ಧರಿತ್ರೀಂ ತೃಣಸಮಾಮ್ । ಅತಶ್ಚಾನೈಕಾಂತ್ಯಾದ್ಗುರುಲಘುತಯಾಽರ್ಥೇಷು ಧನಿನಾಂ ಅವಸ್ಥಾ ವಸ್ತೂನಿ ಪ್ರಥಯತಿ ಚ ಸಂಕೋಚಯತಿ ಚ ॥ 1.45 ॥
ರಾಜಂದುಧುಕ್ಷಸಿ ಯದಿ ಕ್ಷಿತಿಧೇನುಂ ಏತಾಂ ತೇನಾದ್ಯ ವತ್ಸಂ ಇವ ಲೋಕಂ ಅಮುಂ ಪುಷಾಣ ತಸ್ಮಿಂಶ್ಚ ಸಮ್ಯಗನಿಶಂ ಪರಿಪೋಷ್ಯಮಾಣೇ ನಾನಾಫಲೈಃ ಫಲತಿ ಕಲ್ಪಲತೇವ ಭೂಮಿಃ ॥ 1.46 ॥
ಸತ್ಯಾನೃತಾ ಚ ಪರುಷಾ ಪ್ರಿಯವಾದಿನೀ ಚ ಹಿಂಸ್ರಾ ದಯಾಲುರಪಿ ಚಾರ್ಥಪರಾ ವದಾನ್ಯಾ । ನಿತ್ಯವ್ಯಯಾ ಪ್ರಚುರನಿತ್ಯಧನಾಗಮಾ ಚ ವಾರಾಂಗನೇವ ನೃಪನೀತಿರನೇಕರೂಪಾ ॥ 1.47 ॥
ಆಜ್ಞಾ ಕೀರ್ತಿಃ ಪಾಲನಂ ಬ್ರಾಹ್ಮಣಾನಾಂ ದಾನಂ ಭೋಗೋ ಮಿತ್ರಸಂರಕ್ಷಣಂ ಚ ಯೇಷಾಂ ಏತೇ ಷಡ್ಗುಣಾ ನ ಪ್ರವೃತ್ತಾಃ ಕೋಽರ್ಥಸ್ತೇಷಾಂ ಪಾರ್ಥಿವೋಪಾಶ್ರಯೇಣ ॥ 1.48 ॥
ಯದ್ಧಾತ್ರಾ ನಿಜಭಾಲಪಟ್ಟಲಿಖಿತಂ ಸ್ತೋಕಂ ಮಹದ್ವಾ ಧನಂ ತತ್ಪ್ರಾಪ್ನೋತಿ ಮರುಸ್ಥಲೇಽಪಿ ನಿತರಾಂ ಮೇರೌ ತತೋ ನಾಧಿಕಮ್ । ತದ್ಧೀರೋ ಭವ ವಿತ್ತವತ್ಸು ಕೃಪಣಾಂ ವೃತ್ತಿಂ ವೃಥಾ ಸಾ ಕೃಥಾಃ ಕೂಪೇ ಪಶ್ಯ ಪಯೋನಿಧಾವಪಿ ಘಟೋ ಗೃಹ್ಣಾತಿ ತುಲ್ಯಂ ಜಲಮ್ ॥ 1.49 ॥
ತ್ವಂ ಏವ ಚಾತಕಾಧಾರೋಽ ಸೀತಿ ಕೇಷಾಂ ನ ಗೋಚರಃ । ಕಿಂ ಅಂಭೋದವರಾಸ್ಮಾಕಂ ಕಾರ್ಪಣ್ಯೋಕ್ತಂ ಪ್ರತೀಕ್ಷಸೇ ॥ 1.50 ॥
ರೇ ರೇ ಚಾತಕ ಸಾವಧಾನಮನಸಾ ಮಿತ್ರ ಕ್ಷಣಂ ಶ್ರೂಯತಾಂ ಅಂಭೋದಾ ಬಹವೋ ವಸಂತಿ ಗಗನೇ ಸರ್ವೇಽಪಿ ನೈತಾದೃಶಾಃ । ಕೇಚಿದ್ವೃಷ್ಟಿಭಿರಾರ್ದ್ರಯಂತಿ ವಸುಧಾಂ ಗರ್ಜಂತಿ ಕೇಚಿದ್ವೃಥಾ ಯಂ ಯಂ ಪಶ್ಯಸಿ ತಸ್ಯ ತಸ್ಯ ಪುರತೋ ಮಾ ಬ್ರೂಹಿ ದೀನಂ ವಚಃ ॥ 1.51 ॥
ಅಕರುಣತ್ವಂ ಅಕಾರಣವಿಗ್ರಹಃ ಪರಧನೇ ಪರಯೋಷಿತಿ ಚ ಸ್ಪೃಹಾ । ಸುಜನಬಂಧುಜನೇಷ್ವಸಹಿಷ್ಣುತಾ ಪ್ರಕೃತಿಸಿದ್ಧಂ ಇದಂ ಹಿ ದುರಾತ್ಮನಾಮ್ ॥ 1.52 ॥
ದುರ್ಜನಃ ಪರಿಹರ್ತವ್ಯೋ ವಿದ್ಯಯಾಽಲಕೃತೋಽಪಿ ಸನ್ । ಮಣಿನಾ ಭೂಷಿತಃ ಸರ್ಪಃ ಕಿಂ ಅಸೌ ನ ಭಯಂಕರಃ ॥ 1.53 ॥
ಜಾಡ್ಯಂ ಹ್ರೀಮತಿ ಗಣ್ಯತೇ ವ್ರತರುಚೌ ದಂಭಃ ಶುಚೌ ಕೈತವಂ ಶೂರೇ ನಿರ್ಘೃಣತಾ ಮುನೌ ವಿಮತಿತಾ ದೈನ್ಯಂ ಪ್ರಿಯಾಲಾಪಿನಿ । ತೇಜಸ್ವಿನ್ಯವಲಿಪ್ತತಾ ಮುಖರತಾ ವಕ್ತರ್ಯಶಕ್ತಿಃ ಸ್ಥಿರೇ ತತ್ಕೋ ನಾಮ ಗುಣೋ ಭವೇತ್ಸ ಗುಣಿನಾಂ ಯೋ ದುರ್ಜನೈರ್ನಾಂಕಿತಃ ॥ 1.54 ॥
ಲೋಭಶ್ಚೇದಗುಣೇನ ಕಿಂ ಪಿಶುನತಾ ಯದ್ಯಸ್ತಿ ಕಿಂ ಪಾತಕೈಃ ಸತ್ಯಂ ಚೇತ್ತಪಸಾ ಚ ಕಿಂ ಶುಚಿ ಮನೋ ಯದ್ಯಸ್ತಿ ತೀರ್ಥೇನ ಕಿಮ್ । ಸೌಜನ್ಯಂ ಯದಿ ಕಿಂ ಗುಣೈಃ ಸುಮಹಿಮಾ ಯದ್ಯಸ್ತಿ ಕಿಂ ಮಂಡನೈಃ ಸದ್ವಿದ್ಯಾ ಯದಿ ಕಿಂ ಧನೈರಪಯಶೋ ಯದ್ಯಸ್ತಿ ಕಿಂ ಮೃತ್ಯುನಾ ॥ 1.55 ॥
ಶಶೀ ದಿವಸಧೂಸರೋ ಗಲಿತಯೌವನಾ ಕಾಮಿನೀ ಸರೋ ವಿಗತವಾರಿಜಂ ಮುಖಂ ಅನಕ್ಷರಂ ಸ್ವಾಕೃತೇಃ । ಪ್ರಭುರ್ಧನಪರಾಯಣಃ ಸತತದುರ್ಗತಃ ಸಜ್ಜನೋ ನೃಪಾಂಗಣಗತಃ ಖಲೋ ಮನಸಿ ಸಪ್ತ ಶಲ್ಯಾನಿ ಮೇ ॥ 1.56 ॥
ನ ಕಶ್ಚಿಚ್ಚಂಡಕೋಪಾನಾಂ ಆತ್ಮೀಯೋ ನಾಮ ಭೂಭುಜಾಮ್ । ಹೋತಾರಂ ಅಪಿ ಜುಹ್ವಾನಂ ಸ್ಪೃಷ್ಟೋ ವಹತಿ ಪಾವಕಃ ॥ 1.57 ॥
ಮೌನೋಮೂಕಃ ಪ್ರವಚನಪಟುರ್ಬಾಟುಲೋ ಜಲ್ಪಕೋ ವಾ ಧೃಷ್ಟಃ ಪಾರ್ಶ್ವೇ ವಸತಿ ಚ ಸದಾ ದೂರತಶ್ಚಾಪ್ರಗಲ್ಭಃ । ಕ್ಷಾಂತ್ಯಾ ಭೀರುರ್ಯದಿ ನ ಸಹತೇ ಪ್ರಾಯಶೋ ನಾಭಿಜಾತಃ ಸೇವಾಧರ್ಮಃ ಪರಮಗಹನೋ ಯೋಗಿನಾಂ ಅಪ್ಯಗಮ್ಯಃ ॥ 1.58 ॥
ಉದ್ಭಾಸಿತಾಖಿಲಖಲಸ್ಯ ವಿಶೃಂಖಲಸ್ಯ ಪ್ರಾಗ್ಜಾತವಿಸ್ತೃತನಿಜಾಧಮಕರ್ಮವೃತ್ತೇಃ । ದೈವಾದವಾಪ್ತವಿಭವಸ್ಯ ಗುಣದ್ವಿಷೋಽಸ್ಯ ನೀಚಸ್ಯ ಗೋಚರಗತೈಃ ಸುಖಂ ಆಪ್ಯತೇ ॥ 1.59 ॥
ಆರಂಭಗುರ್ವೀ ಕ್ಷಯಿಣೀ ಕ್ರಮೇಣ ಲಘ್ವೀ ಪುರಾ ವೃದ್ಧಿಮತೀ ಚ ಪಶ್ಚಾತ್ । ದಿನಸ್ಯ ಪೂರ್ವಾರ್ಧಪರಾರ್ಧಭಿನ್ನಾ ಛಾಯೇವ ಮೈತ್ರೀ ಖಲಸಜ್ಜನಾನಾಮ್ ॥ 1.60 ॥
ಮೃಗಮೀನಸಜ್ಜನಾನಾಂ ತೃಣಜಲಸಂತೋಷವಿಹಿತವೃತ್ತೀನಾಮ್ । ಲುಬ್ಧಕಧೀವರಪಿಶುನಾ ನಿಷ್ಕಾರಣವೈರಿಣೋ ಜಗತಿ ॥ 1.61 ॥
ವಾಂಛಾ ಸಜ್ಜನಸಂಗಮೇ ಪರಗುಣೇ ಪ್ರೀತಿರ್ಗುರೌ ನಮ್ರತಾ ವಿದ್ಯಾಯಾಂ ವ್ಯಸನಂ ಸ್ವಯೋಷಿತಿ ರತಿರ್ಲೋಕಾಪವಾದಾದ್ಭಯಮ್ । ಭಕ್ತಿಃ ಶೂಲಿನಿ ಶಕ್ತಿರಾತ್ಮದಮನೇ ಸಂಸರ್ಗಮುಕ್ತಿಃ ಖಲೇ ಯೇಷ್ವೇತೇ ನಿವಸಂತಿ ನಿರ್ಮಲಗುಣಾಸ್ತೇಭ್ಯೋ ನರೇಭ್ಯೋ ನಮಃ ॥ 1.62 ॥
ವಿಪದಿ ಧೈರ್ಯಂ ಅಥಾಭ್ಯುದಯೇ ಕ್ಷಮಾ ಸದಸಿ ವಾಕ್ಪಟುತಾ ಯುಧಿ ವಿಕ್ರಮಃ । ಯಶಸಿ ಚಾಭಿರುಚಿರ್ವ್ಯಸನಂ ಶ್ರುತೌ ಪ್ರಕೃತಿಸಿದ್ಧಂ ಇದಂ ಹಿ ಮಹಾತ್ಮನಾಮ್ ॥ 1.63 ॥
ಪ್ರದಾನಂ ಪ್ರಚ್ಛನ್ನಂ ಗೃಹಂ ಉಪಗತೇ ಸಂಭ್ರಮವಿಧಿಃ ಪ್ರಿಯಂ ಕೃತ್ವಾ ಮೌನಂ ಸದಸಿ ಕಥನಂ ಚಾಪ್ಯುಪಕೃತೇಃ । ಅನುತ್ಸೇಕೋ ಲಕ್ಷ್ಮ್ಯಾಂ ಅನಭಿಭವಗಂಧಾಃ ಪರಕಥಾಃ ಸತಾಂ ಕೇನೋದ್ದಿಷ್ಟಂ ವಿಷಮಂ ಅಸಿಧಾರಾವ್ರತಂ ಇದಮ್ ॥ 1.64 ॥
ಕರೇ ಶ್ಲಾಘ್ಯಸ್ತ್ಯಾಗಃ ಶಿರಸಿ ಗುರುಪಾದಪ್ರಣಯಿತಾ ಮುಖೇ ಸತ್ಯಾ ವಾಣೀ ವಿಜಯಿ ಭುಜಯೋರ್ವೀರ್ಯಂ ಅತುಲಮ್ । ಹೃದಿ ಸ್ವಚ್ಛಾ ವೃತ್ತಿಃ ಶ್ರುತಿಂ ಅಧಿಗತಂ ಚ ಶ್ರವಣಯೋರ್ ವಿನಾಪ್ಯೈಶ್ವರ್ಯೇಣ ಪ್ರಕೃತಿಮಹತಾಂ ಮಂಡನಂ ಇದಮ್ ॥ 1.65 ॥
ಸಂಪತ್ಸು ಮಹತಾಂ ಚಿತ್ತಂ ಭವತ್ಯುತ್ಪಲಕೋಮಲಮ್ । ಆಪತ್ಸು ಚ ಮಹಾಶೈಲಶಿಲಾ ಸಂಘಾತಕರ್ಕಶಮ್ ॥ 1.66 ॥
ಸಂತಪ್ತಾಯಸಿ ಸಂಸ್ಥಿತಸ್ಯ ಪಯಸೋ ನಾಮಾಪಿ ನ ಜ್ಞಾಯತೇ ಮುಕ್ತಾಕಾರತಯಾ ತದೇವ ನಲಿನೀಪತ್ರಸ್ಥಿತಂ ರಾಜತೇ । ಸ್ವಾತ್ಯಾಂ ಸಾಗರಶುಕ್ತಿಮಧ್ಯಪತಿತಂ ತನ್ಮೌಕ್ತಿಕಂ ಜಾಯತೇ ಪ್ರಾಯೇಣಾಧಮಮಧ್ಯಮೋತ್ತಮಗುಣಃ ಸಂಸರ್ಗತೋ ಜಾಯತೇ ॥ 1.67 ॥
ಪ್ರೀಣಾತಿ ಯಃ ಸುಚರಿತೈಃ ಪಿತರಂ ಸ ಪುತ್ರೋ ಯದ್ಭರ್ತುರೇವ ಹಿತಂ ಇಚ್ಛತಿ ತತ್ಕಲತ್ರಮ್ । ತನ್ಮಿತ್ರಂ ಆಪದಿ ಸುಖೇ ಚ ಸಮಕ್ರಿಯಂ ಯದ್ ಏತತ್ತ್ರಯಂ ಜಗತಿ ಪುಣ್ಯಕೃತೋ ಲಭಂತೇ ॥ 1.68 ॥
ಏಕೋ ದೇವಃ ಕೇಶವೋ ವಾ ಶಿವೋ ವಾ ಹ್ಯೇಕಂ ಮಿತ್ರಂ ಭೂಪತಿರ್ವಾ ಯತಿರ್ವಾ । ಏಕೋ ವಾಸಃ ಪತ್ತನೇ ವಾ ವನೇ ವಾ ಹ್ಯೇಕಾ ಭಾರ್ಯಾ ಸುಂದರೀ ವಾ ದರೀ ವಾ ॥ 1.69 ॥
ನಮ್ರತ್ವೇನೋನ್ನಮಂತಃ ಪರಗುಣಕಥನೈಃ ಸ್ವಾನ್ಗುಣಾನ್ಖ್ಯಾಪಯಂತಃ ಸ್ವಾರ್ಥಾನ್ಸಂಪಾದಯಂತೋ ವಿತತಪೃಥುತರಾರಂಭಯತ್ನಾಃ ಪರಾರ್ಥೇ । ಕ್ಷಾಂತ್ಯೈವಾಕ್ಷೇಪರುಕ್ಷಾಕ್ಷರಮುಖರಮುಖಾಂದುರ್ಜನಾಂದೂಷಯಂತಃ ಸಂತಃ ಸಾಶ್ಚರ್ಯಚರ್ಯಾ ಜಗತಿ ಬಹುಮತಾಃ ಕಸ್ಯ ನಾಭ್ಯರ್ಚನೀಯಾಃ ॥ 1.70 ॥
ಭವಂತಿ ನಮ್ರಾಸ್ತರವಃ ಫಲೋದ್ಗಮೈರ್ ನವಾಂಬುಭಿರ್ದೂರಾವಲಂಬಿನೋ ಘನಾಃ । ಅನುದ್ಧತಾಃ ಸತ್ಪುರುಷಾಃ ಸಮೃದ್ಧಿಭಿಃ ಸ್ವಭಾವ ಏಷ ಪರೋಪಕಾರಿಣಾಮ್ ॥ 1.71 ॥
ಶ್ರೋತ್ರಂ ಶ್ರುತೇನೈವ ನ ಕುಂಡಲೇನ ದಾನೇನ ಪಾಣಿರ್ನ ತು ಕಂಕಣೇನ । ವಿಭಾತಿ ಕಾಯಃ ಕರುಣಪರಾಣಾಂ ಪರೋಪಕಾರೈರ್ನ ತು ಚಂದನೇನ ॥ 1.72 ॥
ಪಾಪಾನ್ನಿವಾರಯತಿ ಯೋಜಯತೇ ಹಿತಾಯ ಗುಹ್ಯಂ ನಿಗೂಹತಿ ಗುಣಾನ್ಪ್ರಕಟೀಕರೋತಿ । ಆಪದ್ಗತಂ ಚ ನ ಜಹಾತಿ ದದಾತಿ ಕಾಲೇ ಸನ್ಮಿತ್ರಲಕ್ಷಣಂ ಇದಂ ಪ್ರವದಂತಿ ಸಂತಃ ॥ 1.73 ॥
ಪದ್ಮಾಕರಂ ದಿನಕರೋ ವಿಕಚೀಕರೋತಿ ಚಂದ್ರಪ್ರಭೋಲ್ಲಾಸಯತಿ ಕೈರವಚಕ್ರವಾಲಮ್ । ನಾಭ್ಯರ್ಥಿತೋ ಜಲಧರೋಽಪಿ ಜಲಂ ದದಾತಿ ಸಂತಃ ಸ್ವಯಂ ಪರಹಿತೇ ವಿಹಿತಾಭಿಯೋಗಾಃ ॥ 1.74 ॥
ಏಕೇ ಸತ್ಪುರುಷಾಃ ಪರಾರ್ಥಘಟಕಾಃ ಸ್ವಾರ್ಥಂ ಪರಿತ್ಯಜಂತಿ ಯೇ ಸಾಮಾನ್ಯಾಸ್ತು ಪರಾರ್ಥಂ ಉದ್ಯಮಭೃತಃ ಸ್ವಾರ್ಥಾವಿರೋಧೇನ ಯೇ । ತೇಽಮೀ ಮಾನುಷರಾಕ್ಷಸಾಃ ಪರಹಿತಂ ಸ್ವಾರ್ಥಾಯ ನಿಘ್ನಂತಿ ಯೇ ಯೇ ತು ಘ್ನಂತಿ ನಿರರ್ಥಕಂ ಪರಹಿತಂ ತೇ ಕೇ ನ ಜಾನೀಮಹೇ ॥ 1.75 ॥
ಕ್ಷೀರೇಣಾತ್ಮಗತೋದಕಾಯ ಹಿ ಗುಣಾ ದತ್ತಾ ಪುರಾ ತೇಽಖಿಲಾ ಕ್ಷೀರೋತ್ತಾಪಂ ಅವೇಕ್ಷ್ಯ ತೇನ ಪಯಸಾ ಸ್ವಾತ್ಮಾ ಕೃಶಾನೌ ಹುತಃ । ಗಂತುಂ ಪಾವಕಂ ಉನ್ಮನಸ್ತದಭವದ್ದೃಷ್ಟ್ವಾ ತು ಮಿತ್ರಾಪದಂ ಯುಕ್ತಂ ತೇನ ಜಲೇನ ಶಾಮ್ಯತಿ ಸತಾಂ ಮೈತ್ರೀ ಪುನಸ್ತ್ವೀದೃಶೀ ॥ 1.76 ॥
ಇತಃ ಸ್ವಪಿತಿ ಕೇಶವಃ ಕುಲಂ ಇತಸ್ತದೀಯದ್ವಿಷಾಂ ಇತಶ್ಚ ಶರಣಾರ್ಥಿನಾಂ ಶಿಖರಿಣಾಂ ಗಣಾಃ ಶೇರತೇ । ಇತೋಽಪಿ ಬಡವಾನಲಃ ಸಹ ಸಮಸ್ತಸಂವರ್ತಕೈಃ ಅಹೋ ವಿತತಂ ಊರ್ಜಿತಂ ಭರಸಹಂ ಸಿಂಧೋರ್ವಪುಃ ॥ 1.77 ॥
ತೃಷ್ಣಾಂ ಛಿಂಧಿ ಭಜ ಕ್ಷಮಾಂ ಜಹಿ ಮದಂ ಪಾಪೇ ರತಿಂ ಮಾ ಕೃಥಾಃ ಸತ್ಯಂ ಬ್ರೂಹ್ಯನುಯಾಹಿ ಸಾಧುಪದವೀಂ ಸೇವಸ್ವ ವಿದ್ವಜ್ಜನಮ್ । ಮಾನ್ಯಾನ್ಮಾನಯ ವಿದ್ವಿಷೋಽಪ್ಯನುನಯ ಪ್ರಖ್ಯಾಪಯ ಪ್ರಶ್ರಯಂ ಕೀರ್ತಿಂ ಪಾಲಯ ದುಃಖಿತೇ ಕುರು ದಯಾಂ ಏತತ್ಸತಾಂ ಚೇಷ್ಟಿತಮ್ ॥ 1.78 ॥
ಮನಸಿ ವಚಸಿ ಕಾಯೇ ಪುಣ್ಯಪೀಯೂಷಪೂರ್ಣಾಸ್ ತ್ರಿಭುವನಂ ಉಪಕಾರಶ್ರೇಣಿಭಿಃ ಪ್ರೀಣಯಂತಃ । ಪರಗುಣಪರಮಾಣೂನ್ಪರ್ವತೀಕೃತ್ಯ ನಿತ್ಯಂ ನಿಜಹೃದಿ ವಿಕಸಂತಃ ಸಂತ ಸಂತಃ ಕಿಯಂತಃ ॥ 1.79 ॥
ಕಿಂ ತೇನ ಹೇಮಗಿರಿಣಾ ರಜತಾದ್ರಿಣಾ ವಾ ಯತ್ರಾಶ್ರಿತಾಶ್ಚ ತರವಸ್ತರವಸ್ತ ಏವ । ಮನ್ಯಾಮಹೇ ಮಲಯಂ ಏವ ಯದಾಶ್ರಯೇಣ ಕಂಕೋಲನಿಂಬಕಟುಜಾ ಅಪಿ ಚಂದನಾಃ ಸ್ಯುಃ ॥ 1.80 ॥
ರತ್ನೈರ್ಮಹಾರ್ಹೈಸ್ತುತುಷುರ್ನ ದೇವಾ ನ ಭೇಜಿರೇ ಭೀಮವಿಷೇಣ ಭೀತಿಮ್ । ಸುಧಾಂ ವಿನಾ ನ ಪರಯುರ್ವಿರಾಮಂ ನ ನಿಶ್ಚಿತಾರ್ಥಾದ್ವಿರಮಂತಿ ಧೀರಾಃ ॥ 1.81 ॥
ಕ್ವಚಿತ್ಪೃಥ್ವೀಶಯ್ಯಃ ಕ್ವಚಿದಪಿ ಚ ಪರಂಕಶಯನಃ ಕ್ವಚಿಚ್ಛಾಕಾಹಾರಃ ಕ್ವಚಿದಪಿ ಚ ಶಾಲ್ಯೋದನರುಚಿಃ । ಕ್ವಚಿತ್ಕಂಥಾಧಾರೀ ಕ್ವಚಿದಪಿ ಚ ದಿವ್ಯಾಂಬರಧರೋ ಮನಸ್ವೀ ಕಾರ್ಯಾರ್ಥೀ ನ ಗಣಯತಿ ದುಃಖಂ ನ ಚ ಸುಖಮ್ ॥ 1.82 ॥
ಐಶ್ವರ್ಯಸ್ಯ ವಿಭೂಷಣಂ ಸುಜನತಾ ಶೌರ್ಯಸ್ಯ ವಾಕ್ಸಂಯಮೋ ಜ್ಞಾನಸ್ಯೋಪಶಮಃ ಶ್ರುತಸ್ಯ ವಿನಯೋ ವಿತ್ತಸ್ಯ ಪಾತ್ರೇ ವ್ಯಯಃ । ಅಕ್ರೋಧಸ್ತಪಸಃ ಕ್ಷಮಾ ಪ್ರಭವಿತುರ್ಧರ್ಮಸ್ಯ ನಿರ್ವಾಜತಾ ಸರ್ವೇಷಾಂ ಅಪಿ ಸರ್ವಕಾರಣಂ ಇದಂ ಶೀಲಂ ಪರಂ ಭೂಷಣಮ್ ॥ 1.83 ॥
ನಿಂದಂತು ನೀತಿನಿಪುಣಾ ಯದಿ ವಾ ಸ್ತುವಂತು ಲಕ್ಷ್ಮೀಃ ಸಮಾವಿಶತು ಗಚ್ಛತು ವಾ ಯಥೇಷ್ಠಮ್ । ಅದ್ಯೈವ ವಾ ಮರಣಂ ಅಸ್ತು ಯುಗಾಂತರೇ ವಾ ನ್ಯಾಯ್ಯಾತ್ಪಥಃ ಪ್ರವಿಚಲಂತಿ ಪದಂ ನ ಧೀರಾಃ ॥ 1.84 ॥
ಭಗ್ನಾಶಸ್ಯ ಕರಂಡಪಿಂಡಿತತನೋರ್ಮ್ಲಾನೇಂದ್ರಿಯಸ್ಯ ಕ್ಷುಧಾ ಕೃತ್ವಾಖುರ್ವಿವರಂ ಸ್ವಯಂ ನಿಪತಿತೋ ನಕ್ತಂ ಮುಖೇ ಭೋಗಿನಃ । ತೃಪ್ತಸ್ತತ್ಪಿಶಿತೇನ ಸತ್ವರಂ ಅಸೌ ತೇನೈವ ಯಾತಃ ಯಥಾ ಲೋಕಾಃ ಪಶ್ಯತ ದೈವಂ ಏವ ಹಿ ನೃಣಾಂ ವೃದ್ಧೌ ಕ್ಷಯೇ ಕಾರಣಮ್ ॥ 1.85 ॥
ಆಲಸ್ಯಂ ಹಿ ಮನುಷ್ಯಾಣಾಂ ಶರೀರಸ್ಥೋ ಮಹಾನ್ರಿಪುಃ । ನಾಸ್ತ್ಯುದ್ಯಮಸಮೋ ಬಂಧುಃ ಕುರ್ವಾಣೋ ನಾವಸೀದತಿ ॥ 1.86 ॥
ಛಿನ್ನೋಽಪಿ ರೋಹತಿ ತರ್ಕ್ಷೀಣೋಽಪ್ಯುಪಚೀಯತೇ ಪುನಶ್ಚಂದ್ರಃ । ಇತಿ ವಿಮೃಶಂತಃ ಸಂತಃ ಸಂತಪ್ಯಂತೇ ನ ದುಃಖೇಷು ॥ 1.87 ॥
ನೇತಾ ಯಸ್ಯ ಬೃಹಸ್ಪತಿಃ ಪ್ರಹರಣಂ ವಜ್ರಂ ಸುರಾಃ ಸೈನಿಕಾಃ ಸ್ವರ್ಗೋ ದುರ್ಗಂ ಅನುಗ್ರಹಃ ಕಿಲ ಹರೇರೈರಾವತೋ ವಾರಣಃ । ಇತ್ಯೈಶ್ವರ್ಯಬಲಾನ್ವಿತೋಽಪಿ ಬಲಭಿದ್ಭಗ್ನಃ ಪರೈಃ ಸಂಗರೇ ತದ್ವ್ಯಕ್ತಂ ನನು ದೈವಂ ಏವ ಶರಣಂ ಧಿಗ್ಧಿಗ್ವೃಥಾ ಪೌರುಷಮ್ ॥ 1.88 ॥
ಕರ್ಮಾಯತ್ತಂ ಫಲಂ ಪುಂಸಾಂ ಬುದ್ಧಿಃ ಕರ್ಮಾನುಸಾರಿಣೀ । ತಥಾಪಿ ಸುಧಿಯಾ ಭಾವ್ಯಂ ಸುವಿಚಾರ್ಯೈವ ಕುರ್ವತಾ ॥ 1.89 ॥
ಖಲ್ವಾತೋ ದಿವಸೇಶ್ವರಸ್ಯ ಕಿರಣೈಃ ಸಂತಾಡಿತೋ ಮಸ್ತಕೇ ವಾಂಛಂದೇಶಂ ಅನಾತಪಂ ವಿಧಿವಶಾತ್ತಾಲಸ್ಯ ಮೂಲಂ ಗತಃ । ತತ್ರಾಪ್ಯಸ್ಯ ಮಹಾಫಲೇನ ಪತತಾ ಭಗ್ನಂ ಸಶಬ್ದಂ ಶಿರಃ ಪ್ರಾಯೋ ಗಚ್ಛತಿ ಯತ್ರ ಭಾಗ್ಯರಹಿತಸ್ತತ್ರೈವ ಯಾಂತ್ಯಾಪದಃ ॥ 1.90 ॥
ರವಿನಿಶಾಕರಯೋರ್ಗ್ರಹಪೀಡನಂ ಗಜಭುಜಂಗಮಯೋರಪಿ ಬಂಧನಮ್ । ಮತಿಮತಾಂ ಚ ವಿಲೋಕ್ಯ ದರಿದ್ರತಾಂ ವಿಧಿರಹೋ ಬಲವಾನಿತಿ ಮೇ ಮತಿಃ ॥ 1.91 ॥
ಸೃಜತಿ ತಾವದಶೇಷಗುಣಕರಂ ಪುರುಷರತ್ನಂ ಅಲಂಕರಣಂ ಭುವಃ । ತದಪಿ ತತ್ಕ್ಷಣಭಂಗಿ ಕರೋತಿ ಚೇದಹಹ ಕಷ್ಟಂ ಅಪಂಡಿತತಾ ವಿಧೇಃ ॥ 1.92 ॥
ಪತ್ರಂ ನೈವ ಯದಾ ಕರೀರವಿಟಪೇ ದೋಷೋ ವಸಂತಸ್ಯ ಕಿಂ ನೋಲೂಕೋಽಪ್ಯವಲೋಕತೇ ಯದಿ ದಿವಾ ಸೂರ್ಯಸ್ಯ ಕಿಂ ದೂಷಣಮ್ । ಧಾರಾ ನೈವ ಪತಂತಿ ಚಾತಕಮುಖೇ ಮೇಘಸ್ಯ ಕಿಂ ದೂಷಣಂ ಯತ್ಪೂರ್ವಂ ವಿಧಿನಾ ಲಲಾಟಲಿಖಿತಂ ತನ್ಮಾರ್ಜಿತುಂ ಕಃ ಕ್ಷಮಃ ॥ 1.93 ॥
ನಮಸ್ಯಾಮೋ ದೇವಾನ್ನನು ಹತವಿಧೇಸ್ತೇಽಪಿ ವಶಗಾ ವಿಧಿರ್ವಂದ್ಯಃ ಸೋಽಪಿ ಪ್ರತಿನಿಯತಕರ್ಮೈಕಫಲದಃ । ಫಲಂ ಕರ್ಮಾಯತ್ತಂ ಯದಿ ಕಿಂ ಅಮರೈಃ ಕಿಂ ಚ ವಿಧಿನಾ ನಮಸ್ತತ್ಕರ್ಮಭ್ಯೋ ವಿಧಿರಪಿ ನ ಯೇಭ್ಯಃ ಪ್ರಭವತಿ ॥ 1.94 ॥
ಬ್ರಹ್ಮಾ ಯೇನ ಕುಲಾಲವನ್ನಿಯಮಿತೋ ಬ್ರಹ್ಮಾಡಭಾಂಡೋದರೇ ವಿಷ್ಣುರ್ಯೇನ ದಶಾವತಾರಗಹನೇ ಕ್ಷಿಪ್ತೋ ಮಹಾಸಂಕಟೇ । ರುದ್ರೋ ಯೇನ ಕಪಾಲಪಾಣಿಪುಟಕೇ ಭಿಕ್ಷಾಟನಂ ಕಾರಿತಃ ಸೂರ್ಯೋ ಭ್ರಾಮ್ಯತಿ ನಿತ್ಯಂ ಏವ ಗಗನೇ ತಸ್ಮೈ ನಮಃ ಕರ್ಮಣೇ ॥ 1.95 ॥
ನೈವಾಕೃತಿಃ ಫಲತಿ ನೈವಾ ಕುಲಂ ನ ಶೀಲಂ ವಿದ್ಯಾಪಿ ನೈವ ನ ಚ ಯತ್ನಕೃತಾಪಿ ಸೇವಾ । ಭಾಗ್ಯಾನಿ ಪೂರ್ವತಪಸಾ ಖಲು ಸಂಚಿತಾನಿ ಕಾಲೇ ಫಲಂತಿ ಪುರುಷಸ್ಯ ಯಥೈವ ವೃಕ್ಷಾಃ ॥ 1.96 ॥
ವನೇ ರಣೇ ಶತ್ರುಜಲಾಗ್ನಿಮಧ್ಯೇ ಮಹಾರ್ಣವೇ ಪರ್ವತಮಸ್ತಕೇ ವಾ । ಸುಪ್ತಂ ಪ್ರಮತ್ತಂ ವಿಷಮಸ್ಥಿತಂ ವಾ ರಕ್ಷಂತಿ ಪುಣ್ಯಾನಿ ಪುರಾಕೃತಾನಿ ॥ 1.97 ॥
ಯಾ ಸಾಧೂಂಶ್ಚ ಖಲಾನ್ಕರೋತಿ ವಿದುಷೋ ಮೂರ್ಖಾನ್ಹಿತಾಂದ್ವೇಷಿಣಃ ಪ್ರತ್ಯಕ್ಷಂ ಕುರುತೇ ಪರೀಕ್ಷಂ ಅಮೃತಂ ಹಾಲಾಹಲಂ ತತ್ಕ್ಷಣಾತ್ । ತಾಂ ಆರಾಧಯ ಸತ್ಕ್ರಿಯಾಂ ಭಗವತೀಂ ಭೋಕ್ತುಂ ಫಲಂ ವಾಂಛಿತಂ ಹೇ ಸಾಧೋ ವ್ಯಸನೈರ್ಗುಣೇಷು ವಿಪುಲೇಷ್ವಾಸ್ಥಾಂ ವೃಥಾ ಮಾ ಕೃಥಾಃ ॥ 1.98 ॥
ಗುಣವದಗುಣವದ್ವಾ ಕುರ್ವತಾ ಕಾರ್ಯಜಾತಂ ಪರಿಣತಿರವಧಾರ್ಯಾ ಯತ್ನತಃ ಪಂಡಿತೇನ । ಅತಿರಭಸಕೃತಾನಾಂ ಕರ್ಮಣಾಂ ಆವಿಪತ್ತೇರ್ ಭವತಿ ಹೃದಯದಾಹೀ ಶಲ್ಯತುಲ್ಯೋ ವಿಪಾಕಃ ॥ 1.99 ॥
ಸ್ಥಾಲ್ಯಾಂ ವೈದೂರ್ಯಮಯ್ಯಾಂ ಪಚತಿ ತಿಲಕಣಾಂಶ್ಚಂದನೈರಿಂಧನೌಘೈಃ ಸೌವರ್ಣೈರ್ಲಾಂಗಲಾಗ್ರೈರ್ವಿಲಿಖತಿ ವಸುಧಾಂ ಅರ್ಕಮೂಲಸ್ಯ ಹೇತೋಃ । ಕೃತ್ವಾ ಕರ್ಪೂರಖಂಡಾನ್ವೃತ್ತಿಂ ಇಹ ಕುರುತೇ ಕೋದ್ರವಾಣಾಂ ಸಮಂತಾತ್ ಪ್ರಾಪ್ಯೇಮಾಂ ಕರಂಭೂಮಿಂ ನ ಚರತಿ ಮನುಜೋ ಯಸ್ತೋಪ ಮಂದಭಾಗ್ಯಃ ॥ 1.100 ॥
ಮಜ್ಜತ್ವಂಭಸಿ ಯಾತು ಮೇರುಶಿಖರಂ ಶತ್ರುಂ ಜಯತ್ವಾಹವೇ ವಾಣಿಜ್ಯಂ ಕೃಷಿಸೇವನೇ ಚ ಸಕಲಾ ವಿದ್ಯಾಃ ಕಲಾಃ ಶಿಕ್ಷತಾಮ್ । ಆಕಾಶಂ ವಿಪುಲಂ ಪ್ರಯಾತು ಖಗವತ್ಕೃತ್ವಾ ಪ್ರಯತ್ನಂ ಪರಂ ನಾಭಾವ್ಯಂ ಭವತೀಹ ಕರ್ಮವಶತೋ ಭಾವ್ಯಸ್ಯ ನಾಶಃ ಕುತಃ ॥ 1.101 ॥
ಭೀಮಂ ವನಂ ಭವತಿ ತಸ್ಯ ಪುರಂ ಪ್ರಧಾನಂ ಸರ್ವೋ ಜನಃ ಸ್ವಜನತಾಂ ಉಪಯಾತಿ ತಸ್ಯ । ಕೃತ್ಸ್ನಾ ಚ ಭೂರ್ಭವತಿ ಸನ್ನಿಧಿರತ್ನಪೂರ್ಣಾ ಯಸ್ಯಾಸ್ತಿ ಪೂರ್ವಸುಕೃತಂ ವಿಪುಲಂ ನರಸ್ಯ ॥ 1.102 ॥
ಕೋ ಲಾಭೋ ಗುಣಿಸಂಗಮಃ ಕಿಂ ಅಸುಖಂ ಪ್ರಾಜ್ಞೇತರೈಃ ಸಂಗತಿಃ ಕಾ ಹಾನಿಃ ಸಮಯಚ್ಯುತಿರ್ನಿಪುಣತಾ ಕಾ ಧರ್ಮತತ್ತ್ವೇ ರತಿಃ । ಕಃ ಶೂರೋ ವಿಜಿತೇಂದ್ರಿಯಃ ಪ್ರಿಯತಮಾ ಕಾಽನುವ್ರತಾ ಕಿಂ ಧನಂ ವಿದ್ಯಾ ಕಿಂ ಸುಖಂ ಅಪ್ರವಾಸಗಮನಂ ರಾಜ್ಯಂ ಕಿಂ ಆಜ್ಞಾಫಲಮ್ ॥ 1.103 ॥
ಅಪ್ರಿಯವಚನದರಿದ್ರೈಃ ಪ್ರಿಯವಚನಧನಾಢ್ಯೈಃ ಸ್ವದಾರಪರಿತುಷ್ಟೈಃ । ಪರಪರಿವಾದನಿವೃತ್ತೈಃ ಕ್ವಚಿತ್ಕ್ವಚಿನ್ಮಂಡಿತಾ ವಸುಧಾ ॥ 1.104 ॥
ಕದರ್ಥಿತಸ್ಯಾಪಿ ಹಿ ಧೈರ್ಯವೃತ್ತೇರ್ ನ ಶಕ್ಯತೇ ಧೈರ್ಯಗುಣಃ ಪ್ರಮಾರ್ಷ್ಟುಮ್ । ಅಧೋಮುಖಸ್ಯಾಪಿ ಕೃತಸ್ಯ ವಹ್ನೇರ್ ನಾಧಃ ಶಿಖಾ ಯಾತಿ ಕದಾಚಿದೇವ ॥ 1.105 ॥
ಕಾಂತಾಕಟಾಕ್ಷವಿಶಿಖಾ ನ ಲುನಂತಿ ಯಸ್ಯ ಚಿತ್ತಂ ನ ನಿರ್ದಹತಿ ಕೃಪಕೃಶಾನುತಾಪಃ । ಕರ್ಷಂತಿ ಭೂರಿವಿಷಯಾಶ್ಚ ನ ಲೋಭಪಾಶೈರ್ ಲೋಕತ್ರಯಂ ಜಯತಿ ಕೃತ್ಸ್ನಂ ಇದಂ ಸ ಧೀರಃ ॥ 1.106 ॥
ಏಕೇನಾಪಿ ಹಿ ಶೂರೇಣ ಪಾದಾಕ್ರಾಂತಂ ಮಹೀತಲಮ್ । ಕ್ರಿಯತೇ ಭಾಸ್ಕರೇಣೈವ ಸ್ಫಾರಸ್ಫುರಿತತೇಜಸಾ ॥ 1.107 ॥
ವಹ್ನಿಸ್ತಸ್ಯ ಜಲಾಯತೇ ಜಲನಿಧಿಃ ಕುಲ್ಯಾಯತೇ ತತ್ಕ್ಷಣಾನ್ ಮೇರುಃ ಸ್ವಲ್ಪಶಿಲಾಯತೇ ಮೃಗಪತಿಃ ಸದ್ಯಃ ಕುರಂಗಾಯತೇ । ವ್ಯಾಲೋ ಮಾಲ್ಯಗುಣಾಯತೇ ವಿಷರಸಃ ಪೀಯೂಷವರ್ಷಾಯತೇ ಯಸ್ಯಾಂಗೇಽಖಿಲಲೋಕವಲ್ಲಭತಮಂ ಶೀಲಂ ಸಮುನ್ಮೀಲತಿ ॥ 1.108 ॥
ಲಜ್ಜಾಗುಣೌಘಜನನೀಂ ಜನನೀಂ ಇವ ಸ್ವಾಂ ಅತ್ಯಂತಶುದ್ಧಹೃದಯಾಂ ಅನುವರ್ತಮಾನಾಮ್ । ತೇಜಸ್ವಿನಃ ಸುಖಂ ಅಸೂನಪಿ ಸಂತ್ಯಜನತಿ ಸತ್ಯವ್ರತವ್ಯಸನಿನೋ ನ ಪುನಃ ಪ್ರತಿಜ್ಞಾಮ್ ॥ 1.109 ॥
Browse Related Categories: